ಕೆ.ಆರ್.ಮೂವೀ ಮೇಕರ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಟ್ಯೂಬ್ಲೈಟ್‘ ಚಿತ್ರದಲ್ಲಿ ಖ್ಯಾತ ನಿರ್ದೇಶಕರಾದ ಶಶಾಂಕ್, ಗುರುಪ್ರಸಾದ್(ಮಠ), ಜೈಜಗದೀಶ್, ವಿಜಯಲಕ್ಷ್ಮೀಸಿಂಗ್, ವಿ.ಮನೋಹರ್ ಮುಂತಾದವರು ವೀಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.
ವೇಣುಗೋಪಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಮನೋಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕಿರಣ್ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಅಕ್ಷಯ್.ಪಿ.ರಾವ್ ಸಂಕಲನ ಹಾಗೂ ಹರಿಕೃಷ್ಣ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ರಾಜೇಂದ್ರ, ಗುರುನಂದನ್, ಅಜಯ್ರಾಜ್, ಅನುಶ್ರೀ, ಮನದೀಪ್ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.